Odiyoor Sree Vividhodesha Sahakari Niyamitha https://automationcloud.tech/sub ನಾನು, ನನ್ನದು, ನನ್ನಿಂದಾದುದು ಶೂನ್ಯವಾಗಿರಲಿ Tue, 27 Jun 2023 13:15:26 +0000 en-US hourly 1 https://wordpress.org/?v=6.7.2 https://automationcloud.tech/sub/wp-content/uploads/2023/03/logo-50x50.png Odiyoor Sree Vividhodesha Sahakari Niyamitha https://automationcloud.tech/sub 32 32 ಉಚಿತ ನೇತ್ರ ತಪಸಣಾ ಮತ್ತು ಚಿಕಿತ್ಸಾ ಶಿಬಿರ https://automationcloud.tech/sub/2023/06/27/%e0%b2%89%e0%b2%9a%e0%b2%bf%e0%b2%a4-%e0%b2%a8%e0%b3%87%e0%b2%a4%e0%b3%8d%e0%b2%b0-%e0%b2%a4%e0%b2%aa%e0%b2%b8%e0%b2%a3%e0%b2%be/ https://automationcloud.tech/sub/2023/06/27/%e0%b2%89%e0%b2%9a%e0%b2%bf%e0%b2%a4-%e0%b2%a8%e0%b3%87%e0%b2%a4%e0%b3%8d%e0%b2%b0-%e0%b2%a4%e0%b2%aa%e0%b2%b8%e0%b2%a3%e0%b2%be/#respond Tue, 27 Jun 2023 13:13:33 +0000 https://automationcloud.tech/sub/?p=8319

ಒಡಿಯೂರಿನಲ್ಲಿ ನಡೆದ ಉಚಿತ ನೇತ್ರ ತಪಸಣಾ ಮತ್ತು ಚಿಕಿತ್ಸಾ ಶಿಬಿರ🙏
ಒಡಿಯೂರು ಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಬಂಟ್ವಾಳ ತಾಲೂಕು ಮತ್ತು ಕರೋಪಾಡಿ ಗ್ರಾಮ ಸಮಿತಿ ಹಾಗೂ ಘಟಸಮಿತಿ, ಇವರ ನೇತೃತ್ವದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ಮಂಗಳೂರು ಮತ್ತು ಸುಳ್ಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ), ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.) ಸೆಂಚುರಿ ಗ್ರೂಪ್ಸ್ ಬೆಂಗಳೂರು, ಎಸ್ಸಿಲೋರ್ ವಿಷನ್ ಫೌಂಡೇಶನ್, ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ದಶಂಬರ 29ನೇ ಆದಿತ್ಯವಾರ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಕರೋಪಾಡಿ ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ಶ್ರೀಮತಿ ಬೇಬಿ ಆರ್. ಶೆಟ್ಟಿ, ಬೆಂಗಳೂರು ವಿಷನ್ ಫೌಂಡೇಶನ್‍ನ ಶ್ರೀ ಧರ್ಮಪ್ರಸಾದ್ ರೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎ. ಸುರೇಶ್ ರೈ, ಬಿ.ಸಿ.ರೋಡ್ ರಂಗೋಲಿ ಹೋಟೆಲ್‍ನ ಮ್ಹಾಲಕ ಶ್ರೀ ಚಂದ್ರಹಾಸ ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ, ಯೋಜನೆಯ ಕರೋಪಾಡಿ ಗ್ರಾಮಸಮಿತಿಯ ಅಧ್ಯಕ್ಷ ಶ್ರೀ ರಘುನಾಥ ಶೆಟ್ಟಿ ಪಟ್ಲಗುತ್ತು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೇತ್ರತಜ್ಞೆ  ಡಾ.ಸುಧಾರಾಣಿ ಉಪಸ್ಥಿತರಿದ್ದು ಶುಭಹಾರೈಸಿದರು.

ಸುಮಾರು 200ಕ್ಕೂ ಮಿಕ್ಕಿ ಬಂಧುಗಳು ಈ ಶಿಬಿರದ ಸದುಪಯೋಗವನ್ನು ಪಡೆದರು. 40ಕ್ಕೂ ಮಿಕ್ಕಿ ಶಿಬಿರಾರ್ಥಿಗಳನ್ನು ಕಣ್ಣಿನ ಪೊರೆಯ ಚಿಕಿತ್ಸೆಗೆ ವೈದ್ಯರು ಸೂಚಿಸಿದರು. ಅವರಿಗೆ ಮಂಗಳೂರಿನ ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. 130 ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.

Contact us at the Consulting WP office nearest to you or submit a business inquiry online.

See our gallery

Looking for Help in Financial Services? Request a Callback.

]]>
https://automationcloud.tech/sub/2023/06/27/%e0%b2%89%e0%b2%9a%e0%b2%bf%e0%b2%a4-%e0%b2%a8%e0%b3%87%e0%b2%a4%e0%b3%8d%e0%b2%b0-%e0%b2%a4%e0%b2%aa%e0%b2%b8%e0%b2%a3%e0%b2%be/feed/ 0
69ನೇ ಅಖಿಲ ಭಾರತಸಹಕಾರ ಸಪ್ತಾಹದಲ್ಲಿ ರಾಜ್ಯದ ಉತ್ತಮ ಸೌಹಾರ್ದ ಸಹಕಾರ ಸಂಘ ಪ್ರಶಸ್ತಿ https://automationcloud.tech/sub/2023/06/03/69%e0%b2%a8%e0%b3%87-%e0%b2%85%e0%b2%96%e0%b2%bf%e0%b2%b2-%e0%b2%ad%e0%b2%be%e0%b2%b0%e0%b2%a4%e0%b2%b8%e0%b2%b9%e0%b2%95%e0%b2%be%e0%b2%b0-%e0%b2%b8%e0%b2%aa%e0%b3%8d%e0%b2%a4%e0%b2%be%e0%b2%b9/ https://automationcloud.tech/sub/2023/06/03/69%e0%b2%a8%e0%b3%87-%e0%b2%85%e0%b2%96%e0%b2%bf%e0%b2%b2-%e0%b2%ad%e0%b2%be%e0%b2%b0%e0%b2%a4%e0%b2%b8%e0%b2%b9%e0%b2%95%e0%b2%be%e0%b2%b0-%e0%b2%b8%e0%b2%aa%e0%b3%8d%e0%b2%a4%e0%b2%be%e0%b2%b9/#respond Sat, 03 Jun 2023 10:25:29 +0000 https://consulting.stylemixthemes.com/demo/?p=133

69ನೇ ಅಖಿಲ ಭಾರತಸಹಕಾರ ಸಪ್ತಾಹದಲ್ಲಿ ರಾಜ್ಯದ ಉತ್ತಮ ಸೌಹಾರ್ದ ಸಹಕಾರ ಸಂಘ ಪ್ರಶಸ್ತಿ

ಮಂಗಳೂರು : 69ನೇ ಅಖಿಲ ಭಾರತಸಹಕಾರ ಸಪ್ತಾಹದಲ್ಲಿರಾಜ್ಯದಉತ್ತಮ ಸೌಹಾರ್ದ ಸಹಕಾರ ಸಂಘ ಪ್ರಶಸ್ತಿಯನ್ನು ಸಹಕಾರ ಸಚಿವರಾದ ಸನ್ಮಾನ್ಯ ಎಸ್.ಟಿ. ಸೋಮಶೇಖರ್ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್‍ರವರಿಂದ ಒಡಿಯೂರು ಶ್ರೀ  ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಲ| ಎ. ಸುರೇಶ್‍ರೈ ಎಂ.ಜೆ.ಎಫ್ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀ ದಯಾನಂದ ಶೆಟ್ಟಿ ಬಾಕ್ರಬೈಲ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸುಸಂದರ್ಭದಲ್ಲಿ ಸನ್ಮಾನ್ಯ ಶ್ರೀ ವೇದವ್ಯಾಸಕಾಮತ್ ಮಾನ್ಯ ಶಾಸಕರು ಮಂಗಳೂರು ವಿಧಾನ ಸಭಾಕ್ಷೇತ್ರ, ಸನ್ಮಾನ್ಯ ಶ್ರೀ ಯು.ಟಿಖಾದರ್ ಮಾನ್ಯ ಶಾಸಕರು ಮಂಗಳೂರು ವಿಧಾನ ಸಭಾಕ್ಷೇತ್ರ, ಕ್ಯಾಪ್ಟನ್‍ಡಾ|| ಕೆ. ರಾಜೇಂದ್ರ ಭಾ.ಆ.ಸೇ ಸಹಕಾರ ಸಂಘಗಳ ನಿಬಂಧಕರುಕರ್ನಾಟಕ ಸರಕಾರ, ಬೆಂಗಳೂರು ಮತ್ತುಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪರಮಪೂಜ್ಯ ಶ್ರೀ ಶ್ರೀಗುರುದೇವಾನಂದ ಸ್ವಾಮೀಜಿಗಳವರ ದಿವ್ಯ ಹಸ್ತದಿಂದ2011ರಲ್ಲಿ ಉದೀಪನಗೊಂಡ ಸಹಕಾರಿಯು ಸಾದ್ವೀ ಶ್ರೀ ಶ್ರೀ ಮಾತಾನಂದಮಯೀಯವರ ದಿವ್ಯ ಮಾರ್ಗದರ್ಶನದಲ್ಲಿ ಹಾಗೂ ಲ| ಎ.ಸುರೇಶ್‍ರೈ. ಎಂಜೆಎಫ್‍ಇವರಅಧ್ಯಕ್ಷತೆಯಲ್ಲಿ 17 ಮಂದಿ ದಕ್ಷ ನಿರ್ದೇಶಕರನೊಳಗೊಂಡ ಸಹಕಾರಿಯು 18 ಶಾಖೆಗಳ ಮೂಲಕ 12ನೇ ವರ್ಷವನ್ನು ಪೂರೈಸುತ್ತಿದೆ. ಸುಮಾರು 231.47 ಕೋಟಿಠೇವಣಿ ಸಂಗ್ರಹ ಮಾಡಿರೂ. 158.49 ಕೋಟಿ ಹೊರಬಾಕಿ ಸಾಲ, ಸುಮಾರು 244.64 ದುಡಿಯುವ ಬಂಡವಾಳದೊಂದಿಗೆ ರೂ. 2.58 ಕೋಟಿ ಲಾಭಗಳಿಸಿರುವುದಲ್ಲದೇ 5 ಸ್ವಂತ ಕಟ್ಟಡಗಳನ್ನು ಹೊಂದಿರುತ್ತದೆ. ಸುಮಾರು 6100 ಸ್ವ-ಸಹಾಯ ಗುಂಪುಗಳನ್ನು ಹೊಂದಿದ್ದುಇದರಲ್ಲಿ 51,000ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುತ್ತದೆ. ಹಾಗೂ ರಾಸಾಯನಿಕ ಮುಕ್ತಕೃಷಿ ಮತ್ತು ಸಮಗ್ರ ಸುಸ್ಥಿರ ಸಾವಯವ ಕೃಷಿ ಅಭಿವೃದ್ಧಿ ಆಗಬೇಕೆಂಬ ನಿಟ್ಟಿನಲ್ಲಿ ಅವಿಭಜಿತದ.ಕ.ಜಿಲ್ಲೆ ಮತ್ತುಉಡುಪಿ ಜಿಲ್ಲೆಯಲ್ಲಿರೈತರುಕಡಿಮೆಖರ್ಚಿನಲ್ಲಿಅಧಿಕ ಇಳುವರಿಯೊಂದಿಗೆ ಸ್ವಾವಲಂಬಿಗಳಾಗಬೇಕು ಎಂಬ ಮಹತ್ತರವಾದಉದ್ದೇಶವನ್ನುಇಟ್ಟುಕೊಂಡು ಪ್ರತಿರೈತರಿಗೆತೋಟದಲ್ಲಿ ಕೃಷಿ ಕೌಶಲ್ಯಅಭಿವೃದ್ಧಿತರಬೇತಿಯನ್ನು ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಂಸ್ಥಾಪಕರಾದಡಾ|.ಕೆ.ಆರ್ ಹುಲ್ಲುನಾಚೇಗೌಡರವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ.

  • Growth through innovation/creativity:
    Rather than be constrained by ideas for new products, services and new markets coming from just a few people, a Thinking Corporation can tap into the employees.
  • Increased profits:
    The corporation will experience an increase in profits due to savings in operating costs as well as sales from new products, services and ventures.
  • Higher business values:
    The link between profits and business value means that the moment a corporation creates a new sustainable level of profit, the business value is adjusted accordingly.
  • Lower staff turnover:
    This, combined with the culture that must exist for innovation and creativity to flourish, means that new employees will be attracted to the organization.

Contact us at the Consulting WP office nearest to you or submit a business inquiry online.

See our gallery

Looking for a First-Class Business Consultant?

]]>
https://automationcloud.tech/sub/2023/06/03/69%e0%b2%a8%e0%b3%87-%e0%b2%85%e0%b2%96%e0%b2%bf%e0%b2%b2-%e0%b2%ad%e0%b2%be%e0%b2%b0%e0%b2%a4%e0%b2%b8%e0%b2%b9%e0%b2%95%e0%b2%be%e0%b2%b0-%e0%b2%b8%e0%b2%aa%e0%b3%8d%e0%b2%a4%e0%b2%be%e0%b2%b9/feed/ 0
ರೈತರಿಗಾಗಿ ಕೃಷಿ ಕೌಶಲ್ಯ ತರಬೇತಿ – ತೋಟದಲ್ಲಿ ಪಾಠ https://automationcloud.tech/sub/2023/05/29/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b2%be%e0%b2%97%e0%b2%bf/ https://automationcloud.tech/sub/2023/05/29/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b2%be%e0%b2%97%e0%b2%bf/#respond Mon, 29 May 2023 12:30:17 +0000 https://consulting.stylemixthemes.com/demo/?p=131

ರೈತರಿಗಾಗಿ ಕೃಷಿ ಕೌಶಲ್ಯ ತರಬೇತಿ – ತೋಟದಲ್ಲಿ ಪಾಠ

ರಾಸಾಯನಿಕ ಗೊಬ್ಬರಗಳ ಬಳಕೆಯ ದುಷ್ಪರಿಣಾಮಗಳಿಂದ ರೈತರನ್ನು ರಕ್ಷಿಸುವ ಸಮಾಜಮುಖಿ ಕಾರ್ಯವನ್ನು ಸಹಕಾರಿಯು ನಡೆಸುತ್ತಿದೆ. ಕೃಷಿಯಲ್ಲಿ ಕಡಿಮೆ ಖರ್ಚು ಮಾಡಿ ಹೆಚ್ಚು ಆದಾಯ ಗಳಿಸುವುದು, ಹೆಚ್ಚು ಇಳುವರಿ ಪಡೆಯುವ ಬಗ್ಗೆ ಕೃಷಿ ಕೌಶಲ್ಯ ತರಬೇತಿಯನ್ನು ರೈತರಿಗಾಗಿ ಅವರ ತೋಟದಲ್ಲಿಯೇ ಸಾವಯವ ಪದ್ಧತಿಯಲ್ಲಿ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಂಸ್ಥಾಪಕ ಡಾ| ಕೆ.ಆರ್.ಹುಲ್ಲುನಾಚೇ ಗೌಡರವರ ಮಾರ್ಗದರ್ಶದಲ್ಲಿ ನುರಿತ ವಿಜ್ಞಾನಿಗಳಿಂದ ಮಣ್ಣು ಪರೀಕ್ಷೆಯ ಬಗ್ಗೆ, ಮಣ್ಣಿನ ಫಲವತ್ತತೆ, ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು, ಮಣ್ಣಿನ ಗುಣ ಧರ್ಮಗಳ ಕುರಿತು, ಬೆಳೆಗಳಿಗೆ ಸಕಾಲದಲ್ಲಿ ಬಳಸಬೇಕಾದ ಗೊಬ್ಬರ ಪ್ರಮಾಣ, ಪೂರೈಸಬೇಕಾದ ನೀರಿನ ಪ್ರಮಾಣ ಇವುಗಳ ಬಗ್ಗೆ ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ.
ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ನಿರ್ದೇಶಕರಾದ ಶ್ರೀ ಲೋಕನಾಥ ಶೆಟ್ಟಿ ಕೊಡಿಯಾಲ್‍ಬೈಲ್, ಶ್ರೀ ವೇಣುಗೋಪಾಲ ಮಾರ್ಲ, ಸೇರಾಜೆ ಶ್ರೀ ಗಣಪತಿ ಭಟ್, ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ದಯಾನಂದ ಶೆಟ್ಟಿ ಬಾಕ್ರಬೈಲ್ ಮತ್ತು ಸಹಕಾರಿಯ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.

Contact us at the Consulting WP office nearest to you or submit a business inquiry online.

See our gallery

Looking for Financial Services? Request a Callback.

]]>
https://automationcloud.tech/sub/2023/05/29/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b2%be%e0%b2%97%e0%b2%bf/feed/ 0
ರಾಜ್ಯದ ಉತ್ತಮ ಸಹಕಾರಿ ಪ್ರಶಸ್ತಿ https://automationcloud.tech/sub/2023/05/28/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%89%e0%b2%a4%e0%b3%8d%e0%b2%a4%e0%b2%ae-%e0%b2%b8%e0%b2%b9%e0%b2%95%e0%b2%be%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%b6%e0%b2%b8/ https://automationcloud.tech/sub/2023/05/28/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%89%e0%b2%a4%e0%b3%8d%e0%b2%a4%e0%b2%ae-%e0%b2%b8%e0%b2%b9%e0%b2%95%e0%b2%be%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%b6%e0%b2%b8/#respond Sun, 28 May 2023 07:14:55 +0000 https://consulting.stylemixthemes.com/demo/?p=1

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ 18ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೌಹಾರ್ದ ಸಹಕಾರಿ ಕ್ಷೇತ್ರದ 2018-2019ನೇ ಸಾಲಿನ ರಾಜ್ಯದ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿಯನ್ನು ಒಡಿಯೂರು ಶ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ, ದಕ್ಷಿಣ ಕನ್ನಡ ಇವರಿಗೆ ನೀಡಿ ಪುರಸ್ಕರಿಸಿದೆ. ಕರ್ನಾಟಕರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಇದರ ಅಧ್ಯಕ್ಷರಾದ ಶ್ರೀ ಬಿ.ಹೆಚ್ ಕೃಷ್ಣಾ ರೆಡ್ಡಿ ಕರ್ನಾಟಕ ಸರಕಾರದ ಸನ್ಮಾನ್ಯ ಮಹಿಳಾ ಮತ್ತು ಶಿಶು ಕಲ್ಯಾಣ ಮಂತ್ರಿ ಶ್ರೀಮತಿ ಶಶಿಕಲಾ ಜೊಲ್ಲೆಅಣ್ಣ ಸಾಹೇಬ್‍ ಮತ್ತು ಕ.ರಾ.ಸೌ.ಸಂ.ಸ.ನಿ ಇದರ ಮೈಸೂರು ಪ್ರಾಂತದ ನಿರ್ದೇಶಕರಾದ ಶ್ರೀ ಎಸ್.ಕೆ.ಮಂಜುನಾಥ್, ಶ್ರೀ ಎಚ್.ವಿ.ರಾಜೇವ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣಗೌಡ ಜಿ. ಪಾಟೀಲ್‍ ಇವರು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಲ|| ಎ. ಸುರೇಶ್‍ರೈ ಎಂ. ಜೆ. ಎಫ್‍. ಇವರಿಗೆ ಸ್ಮರಣಿಕೆಯೊಂದಿಗೆ ರಾಜ್ಯದ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಅಭಿನಂದಿಸಿದರು
ಪರಮ ಪೂಜ್ಯ ಶ್ರೀ ಶ್ರೀ ಗುರು ದೇವಾನಂದ ಸ್ವಾಮೀಜಿಗಳವರ ಶುಭಾಶೀರ್ವಾದದೊಂದಿಗೆ ಲ|| ಎ ಸುರೇಶ್‍ ರೈ ಎಂ.ಜೆ.ಎಫ್‍. ಇವರ ಅದ್ಯಕ್ಷತೆಯಲ್ಲಿ 2011ರಲ್ಲಿಆರಂಭವಾದ ಸಹಕಾರಿ ಯುಕ್ಷಿಪ್ರವಾಗಿ ಅಭಿವೃದ್ಧಿಯನ್ನು ಕಂಡ ಸಹಕಾರಿಯಾಗಿರುತ್ತದೆ. ಕೇವಲ 8 ವರ್ಷಗಳಲ್ಲಿ 15 ಶಾಖೆಗಳೊಂದಿಗೆ ಸಂಪೂರ್ಣ ಗಣಕೀಕೃತಕೋರ್ ಸಿಸ್ಟಂ, ಮೊಬೈಲ್‍ ಆ್ಯಪ್ ತಂತ್ರಜ್ಞಾನಗಳ ಮೂಲಕ ತನ ಸದಸ್ಯರಿಗೆತ್ವರಿತ ಹಾಗೂ ಪಾರದರ್ಶಕ ಸೇವೆಯನ್ನು ನೀಡುತ್ತಿದೆ. ಒಡಿಯೂರಿನ ಪೂಜ್ಯ ಶ್ರೀಗಳವರ ಗ್ರಾಮವಿಕಾಸಯೋಜನೆಯ ಸಂಕಲ್ಪದಂತೆ ದಕ್ಷಿಣಕನ್ನಡ – ಉಡುಪಿ, ಉಭಯ ಜಿಲ್ಲೆಗಳ ಹಳ್ಳಿ ಹಳ್ಳಿಗಳ ಬಡಜನರನ್ನು ಒಗ್ಗೂಡಿಸಿ ಸ್ವ-ಸಹಾಯ ಗುಂಪುಗಳನ್ನು ಕಟ್ಟಿ ಆ ಮೂಲಕ ಬಡಜನರ ಆರ್ಥಿಕ-ಸಾಮಾಜಿಕ ಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿಯು ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದೆ. ಸಹಕಾರಿಯ ಅಧ್ಯಕ್ಷರಾದ ಲ|| ಎ ಸುರೇಶ್‍ ರೈ ಎಂ. ಜೆ. ಎಫ್‍. ಇವರು ಸಹಕಾರಿ ಸೇಬೆಯನ್ನು ಪೂಜ್ಯ ಶ್ರೀಗಳವರ ಸೇವೆ ಎಂದು ತಿಳಿದು ಪ್ರಾಮಾಣಿಕತೆ, ಸಮರ್ಪಣಾ ಭಾವದಿಂದ ಸಹಕಾರಿಯ ಉನ್ನತಿಗೆ ಶ್ರಮ ವಹಿಸಿದವರು. 8 ವರ್ಷಗಳಿಂದ ಅಧ್ಯಕ್ಷರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿರುವುದರಿಂದ ಪೂಜ್ಯ ಶ್ರೀಗುರುಗಳ ಆಶೀರ್ವಾದವು ಪ್ರಸಾದವಾಗಿಪ್ರಶಸ್ತಿ ರೂಪದಲ್ಲಿ ಲಭಿಸಿದೆ ಎಂದರು. ಈ ಪ್ರಶಸ್ತಿಯು ಒಡಿಯೂರು ಸಹಕಾರಿಯ ಎಲ್ಲಾ ಸದಸ್ಯರಿಗೆ, ಆಡಳಿತ ಮಂಡಳಿಗೆ, ಸಿಬ್ಬಂದಿಗಳಿಗೆ, ಒಡಿಯೂರು ಸಂಸ್ಥಾನದ ಎಲ್ಲಾ ಭಕ್ತರಿಗೆ ಸಂದಗೌರವವಾಗಿದೆ ಎಂದರು. ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಎಲ್ಲಾ ನಿರ್ದೇಶಕರು ಮೈಸೂರು ಪ್ರಾಂತದ ಎಲ್ಲಾ ಅಧಿಕಾರಿಗಳು ಒಡಿಯೂರು ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಸೇರಾಜೆ ಗಣಪತಿ ಭಟ್, ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ದೇವಪ್ಪ ನೋಂಡ, ಶ್ರೀ ತಾರಾನಾಥ ಶೆಟ್ಟಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಎಂ.ಉಗ್ಗಪ್ಪ ಶೆಟ್ಟಿ ಹಾಗೂ ಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.

Contact us at the Consulting WP office nearest to you or submit a business inquiry online.

See our gallery

Looking for Help in Financial Services? Request a Callback.

]]>
https://automationcloud.tech/sub/2023/05/28/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%89%e0%b2%a4%e0%b3%8d%e0%b2%a4%e0%b2%ae-%e0%b2%b8%e0%b2%b9%e0%b2%95%e0%b2%be%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%b6%e0%b2%b8/feed/ 0