- May 28, 2023
- Posted by: admin
- Category: News & Events

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ 18ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೌಹಾರ್ದ ಸಹಕಾರಿ ಕ್ಷೇತ್ರದ 2018-2019ನೇ ಸಾಲಿನ ರಾಜ್ಯದ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿಯನ್ನು ಒಡಿಯೂರು ಶ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ, ದಕ್ಷಿಣ ಕನ್ನಡ ಇವರಿಗೆ ನೀಡಿ ಪುರಸ್ಕರಿಸಿದೆ. ಕರ್ನಾಟಕರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಇದರ ಅಧ್ಯಕ್ಷರಾದ ಶ್ರೀ ಬಿ.ಹೆಚ್ ಕೃಷ್ಣಾ ರೆಡ್ಡಿ ಕರ್ನಾಟಕ ಸರಕಾರದ ಸನ್ಮಾನ್ಯ ಮಹಿಳಾ ಮತ್ತು ಶಿಶು ಕಲ್ಯಾಣ ಮಂತ್ರಿ ಶ್ರೀಮತಿ ಶಶಿಕಲಾ ಜೊಲ್ಲೆಅಣ್ಣ ಸಾಹೇಬ್ ಮತ್ತು ಕ.ರಾ.ಸೌ.ಸಂ.ಸ.ನಿ ಇದರ ಮೈಸೂರು ಪ್ರಾಂತದ ನಿರ್ದೇಶಕರಾದ ಶ್ರೀ ಎಸ್.ಕೆ.ಮಂಜುನಾಥ್, ಶ್ರೀ ಎಚ್.ವಿ.ರಾಜೇವ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣಗೌಡ ಜಿ. ಪಾಟೀಲ್ ಇವರು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಲ|| ಎ. ಸುರೇಶ್‍ರೈ ಎಂ. ಜೆ. ಎಫ್. ಇವರಿಗೆ ಸ್ಮರಣಿಕೆಯೊಂದಿಗೆ ರಾಜ್ಯದ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಅಭಿನಂದಿಸಿದರು
ಪರಮ ಪೂಜ್ಯ ಶ್ರೀ ಶ್ರೀ ಗುರು ದೇವಾನಂದ ಸ್ವಾಮೀಜಿಗಳವರ ಶುಭಾಶೀರ್ವಾದದೊಂದಿಗೆ ಲ|| ಎ ಸುರೇಶ್ ರೈ ಎಂ.ಜೆ.ಎಫ್. ಇವರ ಅದ್ಯಕ್ಷತೆಯಲ್ಲಿ 2011ರಲ್ಲಿಆರಂಭವಾದ ಸಹಕಾರಿ ಯುಕ್ಷಿಪ್ರವಾಗಿ ಅಭಿವೃದ್ಧಿಯನ್ನು ಕಂಡ ಸಹಕಾರಿಯಾಗಿರುತ್ತದೆ. ಕೇವಲ 8 ವರ್ಷಗಳಲ್ಲಿ 15 ಶಾಖೆಗಳೊಂದಿಗೆ ಸಂಪೂರ್ಣ ಗಣಕೀಕೃತಕೋರ್ ಸಿಸ್ಟಂ, ಮೊಬೈಲ್ ಆ್ಯಪ್ ತಂತ್ರಜ್ಞಾನಗಳ ಮೂಲಕ ತನ ಸದಸ್ಯರಿಗೆತ್ವರಿತ ಹಾಗೂ ಪಾರದರ್ಶಕ ಸೇವೆಯನ್ನು ನೀಡುತ್ತಿದೆ. ಒಡಿಯೂರಿನ ಪೂಜ್ಯ ಶ್ರೀಗಳವರ ಗ್ರಾಮವಿಕಾಸಯೋಜನೆಯ ಸಂಕಲ್ಪದಂತೆ ದಕ್ಷಿಣಕನ್ನಡ – ಉಡುಪಿ, ಉಭಯ ಜಿಲ್ಲೆಗಳ ಹಳ್ಳಿ ಹಳ್ಳಿಗಳ ಬಡಜನರನ್ನು ಒಗ್ಗೂಡಿಸಿ ಸ್ವ-ಸಹಾಯ ಗುಂಪುಗಳನ್ನು ಕಟ್ಟಿ ಆ ಮೂಲಕ ಬಡಜನರ ಆರ್ಥಿಕ-ಸಾಮಾಜಿಕ ಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿಯು ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದೆ. ಸಹಕಾರಿಯ ಅಧ್ಯಕ್ಷರಾದ ಲ|| ಎ ಸುರೇಶ್ ರೈ ಎಂ. ಜೆ. ಎಫ್. ಇವರು ಸಹಕಾರಿ ಸೇಬೆಯನ್ನು ಪೂಜ್ಯ ಶ್ರೀಗಳವರ ಸೇವೆ ಎಂದು ತಿಳಿದು ಪ್ರಾಮಾಣಿಕತೆ, ಸಮರ್ಪಣಾ ಭಾವದಿಂದ ಸಹಕಾರಿಯ ಉನ್ನತಿಗೆ ಶ್ರಮ ವಹಿಸಿದವರು. 8 ವರ್ಷಗಳಿಂದ ಅಧ್ಯಕ್ಷರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿರುವುದರಿಂದ ಪೂಜ್ಯ ಶ್ರೀಗುರುಗಳ ಆಶೀರ್ವಾದವು ಪ್ರಸಾದವಾಗಿಪ್ರಶಸ್ತಿ ರೂಪದಲ್ಲಿ ಲಭಿಸಿದೆ ಎಂದರು. ಈ ಪ್ರಶಸ್ತಿಯು ಒಡಿಯೂರು ಸಹಕಾರಿಯ ಎಲ್ಲಾ ಸದಸ್ಯರಿಗೆ, ಆಡಳಿತ ಮಂಡಳಿಗೆ, ಸಿಬ್ಬಂದಿಗಳಿಗೆ, ಒಡಿಯೂರು ಸಂಸ್ಥಾನದ ಎಲ್ಲಾ ಭಕ್ತರಿಗೆ ಸಂದಗೌರವವಾಗಿದೆ ಎಂದರು. ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಎಲ್ಲಾ ನಿರ್ದೇಶಕರು ಮೈಸೂರು ಪ್ರಾಂತದ ಎಲ್ಲಾ ಅಧಿಕಾರಿಗಳು ಒಡಿಯೂರು ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಸೇರಾಜೆ ಗಣಪತಿ ಭಟ್, ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ದೇವಪ್ಪ ನೋಂಡ, ಶ್ರೀ ತಾರಾನಾಥ ಶೆಟ್ಟಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಎಂ.ಉಗ್ಗಪ್ಪ ಶೆಟ್ಟಿ ಹಾಗೂ ಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.