ರೈತರಿಗಾಗಿ ಕೃಷಿ ಕೌಶಲ್ಯ ತರಬೇತಿ – ತೋಟದಲ್ಲಿ ಪಾಠ
- May 29, 2023
- Posted by: admin
- Category: News & Events

ರಾಸಾಯನಿಕ ಗೊಬ್ಬರಗಳ ಬಳಕೆಯ ದುಷ್ಪರಿಣಾಮಗಳಿಂದ ರೈತರನ್ನು ರಕ್ಷಿಸುವ ಸಮಾಜಮುಖಿ ಕಾರ್ಯವನ್ನು ಸಹಕಾರಿಯು ನಡೆಸುತ್ತಿದೆ. ಕೃಷಿಯಲ್ಲಿ ಕಡಿಮೆ ಖರ್ಚು ಮಾಡಿ ಹೆಚ್ಚು ಆದಾಯ ಗಳಿಸುವುದು, ಹೆಚ್ಚು ಇಳುವರಿ ಪಡೆಯುವ ಬಗ್ಗೆ ಕೃಷಿ ಕೌಶಲ್ಯ ತರಬೇತಿಯನ್ನು ರೈತರಿಗಾಗಿ ಅವರ ತೋಟದಲ್ಲಿಯೇ ಸಾವಯವ ಪದ್ಧತಿಯಲ್ಲಿ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಂಸ್ಥಾಪಕ ಡಾ| ಕೆ.ಆರ್.ಹುಲ್ಲುನಾಚೇ ಗೌಡರವರ ಮಾರ್ಗದರ್ಶದಲ್ಲಿ ನುರಿತ ವಿಜ್ಞಾನಿಗಳಿಂದ ಮಣ್ಣು ಪರೀಕ್ಷೆಯ ಬಗ್ಗೆ, ಮಣ್ಣಿನ ಫಲವತ್ತತೆ, ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು, ಮಣ್ಣಿನ ಗುಣ ಧರ್ಮಗಳ ಕುರಿತು, ಬೆಳೆಗಳಿಗೆ ಸಕಾಲದಲ್ಲಿ ಬಳಸಬೇಕಾದ ಗೊಬ್ಬರ ಪ್ರಮಾಣ, ಪೂರೈಸಬೇಕಾದ ನೀರಿನ ಪ್ರಮಾಣ ಇವುಗಳ ಬಗ್ಗೆ ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ.
ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ನಿರ್ದೇಶಕರಾದ ಶ್ರೀ ಲೋಕನಾಥ ಶೆಟ್ಟಿ ಕೊಡಿಯಾಲ್‍ಬೈಲ್, ಶ್ರೀ ವೇಣುಗೋಪಾಲ ಮಾರ್ಲ, ಸೇರಾಜೆ ಶ್ರೀ ಗಣಪತಿ ಭಟ್, ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ದಯಾನಂದ ಶೆಟ್ಟಿ ಬಾಕ್ರಬೈಲ್ ಮತ್ತು ಸಹಕಾರಿಯ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.